ಪುನೀತ್‌ರಾಜಕುಮಾರ್ ನೂತನ ಚಿತ್ರಕ್ಕೆ ಹಾಡುಗಳ ಧ್ವನಿಮುದ್ರಣ
Posted date: 10 Tue, Sep 2013 – 10:14:14 AM

ಪವರ್‌ಸ್ಟಾರ್ ಪುನೀತ್‌ರಾಜಕುಮಾರ್ ನಾಯಕರಾಗಿ ನಟಿಸುತ್ತಿರುವ ನೂತನ ಚಿತ್ರದ ಹಾಡುಗಳ ಧ್ವನಿಮುದ್ರಣ ಗೌರಿಹಬ್ಬದ ಶುಭದಿನದಂದು ಆಕಾಶ್ ಸ್ಟುಡಿಯೋದಲ್ಲಿ ಆರಂಭವಾಯಿತು. ಸೆಂಚುರಿ ಸ್ಟಾರ್ ಶಿವರಾಜಕುಮಾರ್, ರಾಘವೇಂದ್ರರಾಜಕುಮಾರ್ ಮುಂತಾದ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿದ್ದರು.
    ೧೪ ರೀಲ್ಸ್ ಎಂಟರ್‌ಟೈನ್‌ಮೆಂಟ್ ಪ್ರೈ ಲಿ ಲಾಂಛನದಲ್ಲಿ ರಾಮ್ ಅಚಂಟ, ಗೋಪಿ ಅಚಂಟ, ಅನಿಲ್ ಸುಂಕರ, ಪ್ರವೀಣ್ ಕೊಲ್ಲ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರ ತೆಲುಗಿನಲ್ಲಿ ಮಹೇಶ್‌ಬಾಬು ಅವರು ಅಭಿನಯಿಸಿ ಭರ್ಜರಿ ಯಶಸ್ಸು ಕಂಡ ‘ದೂಕುಡು‘ ಚಿತ್ರದ ರೀಮೇಕ್.
    ಕೆ.ಮಾದೇಶ್ ಅವರು ನಿರ್ದೇಶಿಸುತ್ತಿರುವ ಈ ಚಿತ್ರದ ಚಿತ್ರೀಕರಣ ನವಂಬರ್ ೨೫ರಿಂದ ಆರಂಭವಾಗಲಿದೆ. ಬೆಂಗಳೂರು, ಬಳ್ಳಾರಿ, ಮೈಸೂರು ಹಾಗೂ ವಿದೇಶದಲ್ಲಿ ಚಿತ್ರೀಕರಣ ನಡೆಯಲಿದೆ.
    ಐದು ಹಾಡುಗಳಿರುವ ಈ ಚಿತ್ರಕ್ಕೆ ತೆಲುಗಿನ ಖ್ಯಾತ ಸಂಗೀತ ನಿರ್ದೇಶಕ ಎಸ್.ಎಸ್.ತಮನ್ ಸಂಗೀತ ನೀಡುತ್ತಿದ್ದಾರೆ. ಕನ್ನಡದಲ್ಲಿ ಇದು ಅವರ ಪ್ರಥಮ ಚಿತ್ರ. ಕೃಷ್ಣಕುಮಾರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಎಂ.ಎಸ್.ರಮೇಶ್ ಸಂಭಾಷಣೆ ಬರೆದಿದ್ದಾರೆ. ಕೆ.ಎಸ್.ಚಂಪಕಧಾಮ(ಬಾಬು), ಎಸ್.ಕುಮಾರ್ ನಿರ್ಮಾಣ ನಿರ್ವಹಣೆ ಮಾಡುತ್ತಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed